ಕನ್ನ ಡ ವಿಭಾಗವು 1990ರಿಂ ದ ಕನ್ನ ಡ ಸಂಘವನ್ನು ಪ್ರಾರಂಭಿಸಿ ವಿವಿಧ ಸಾಂ ಸ್ಕೃ ತಿಕ ಕಾರ್ಯ ಕ್ರಮಗಳನ್ನು ಮತ್ತು ತರಬೇತಿ ಶಿಬಿರಗಳನ್ನು ಹಮ್ಮಿ ಕೊಂ ಡಿದ್ದು ನಾಡಿನ ಹೆಸರಾಂತ ನಟರು, ರಂಗಕರ್ಮಿಗಳು, ಸಂಗೀ ತಗಾರರು, ಜಾನಪದ ತಜ್ಞರು ಆಗಮಿಸಿ ಶಿಬಿರಗಳನ್ನು ನಡೆಸಿಕೊಟ್ಟಿ ರುತ್ತಾರೆ. ನಾಟಕಕಾರರಾದ ಬಿ.ವಿ.ರಾಜಾರಾಂ, ಮಂಗಳಾ ರಂಗಾಯಣ, ನಿನಾಸಂ ಅಶ್ವ ಥ್, ಲಕ್ಷ್ಮಿ ಚಂದ್ರಶೇಖರ್ ಮುಂತಾದ ನಾಟಕಕಾರರು ಶ್ವೇ ತಾ ಪ್ರಭು, ಪಿನಾಕಪಾಣಿ, ಬಂಡ್ಳ ಹಳ್ಳಿ ವಿಜಯ್ ಕುಮಾರ್ ಮುಂತಾದ ಸಂಗೀ ತಗಾರರು, ನಟ ಸಿದ್ಧಾರ್ಥ್ ಮಾಧ್ಯ ಮಿಕ್, ಕಂಸಾಳೆ ಮಹದೇವಯ್ಯ ಮುಂತಾದವರು ಆಗಮಿಸಿ ನಾಟಕ, ಕಂಸಾಳೆ, ವೀ ರಗಾಸೆ, ಜಾನಪದ ಗಾಯನ ಮತ್ತು ವಚನ ಗಾಯನ ಮುಂತಾದ ಕಲಿಕಾ ಕಾರ್ಯಾ ಗಾರಗಳನ್ನು ಪ್ರಮಾಣಪತ್ರದೊಂ ದಿಗೆ ನಡೆಸಿಕೊಟ್ಟಿ ದ್ದಾರೆ.

ಜಿ.ಎಸ್. ಶಿವರುದ್ರ ಪ್ಪ , ಡಾ.ಚಂದ್ರಶೇಖರ ಕಂಬಾರ, ಡಾ.ಸಿದ್ಧ ಲಿಂ ಗಯ್ಯ , ಎಲ್. ಹನುಮಂತಯ್ಯ , ಬರಗೂರು ರಾಮಚಂದ್ರ ಪ್ಪ , ಎಚ್.ಎಸ್. ಶಿವಪ್ರಕಾಶ್, ಜಿ.ಎಸ್.ಸಿದ್ಧ ಲಿಂ ಗಯ್ಯ ,ಪ್ರ ತಿಭಾ ನಂದಕುಮಾರ್, ಬಿ.ಟಿ.ಲಲಿತಾ ನಾಯಕ್, ಕಮಲಾ ಹಂಪನಾ, ಲೀ ಲಾದೇವಿ ಆರ್ ಪ್ರಸಾದ್, ಎಂ .ಎಸ್.ಆಶಾದೇವಿ, ಸಂಧ್ಯಾ ರೆಡ್ಡಿ , ಜರಗನಹಳ್ಳಿ ಶಿವಶಂಕರ್ ಹೀಗೆ ನಾಡಿನ ಹೆಸರಾಂತ ಸಾಹಿತಿಗಳು, ವಿಮರ್ಶ ಕರು, ಕವಿಗಳು ವಿಭಾಗದ ಕಾರ್ಯ ಕ್ರಮಗಳಲ್ಲಿ ಭಾಗವಹಿಸಿ ವಿದ್ಯಾ ರ್ಥಿ ನಿಯರಿಗೆ ಉಪನ್ಯಾ ಸದ ಮೂಲಕ ಅರಿವು ಮೂಡಿಸಿದ್ದಾರೆ.

ಇದರ ಜೊತೆಗೆ ವಿಭಾಗವು ಪಠ್ಯ ಕೇಂದ್ರಿ ತ ನಾಟಕ ಪ್ರ ದರ್ಶ ನಗಳು ಜಾನಪದ ಕಲಾ ಮೇಳ, ನುಡಿ ಸಡಗರ ಮುಂತಾದ ಚಟುವಟಿಕೆಯುಕ್ತ ಕಾರ್ಯ ಕ್ರಮಗಳನ್ನು ನಿರಂತರವಾಗಿ ಆಯೋ ಜಿಸಿದೆ. ʼನುಡಿದೀಪʼ ಎಂ ಬ ವಾರ್ತಾ ಸಂಚಿಕೆಯನ್ನು ವಿದ್ಯಾ ರ್ಥಿ ನಿಯರಲ್ಲಿ ಅಡಗಿರುವ ಸುಪ್ತ ಪ್ರ ತಿಭೆಗಳನ್ನು ಹೊರತರಲು ಪ್ರ ತೀ ವರ್ಷ ಪ್ರ ಕಟಿಸುತ್ತಾ ಬಂದಿರುತ್ತದೆ 

ಇಲಾಖೆಯಲ್ಲಿ ಚಟುವಟಿಕೆಗಳು

TOP